All for Joomla The Word of Web Design

10a5dd3717cbf0a3acbb5fca6563cd52

ಚೆನ್ನೈ:  ಕಳೆದ ಶುಕ್ರವಾರ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್  ಚಿತ್ರ ನೆರೆಯ ರಾಜ್ಯ ತಮಿಳುನಾಡಿನಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.  ಆರಂಭಿಕವಾಗಿ  ಕೇವಲ 100 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಈಗ 300 ಥಿಯೇಟರ್ ಗಳಲ್ಲಿ ಉತ್ತಮ ಲಾಭಂಶದೊಂದಿಗೆ ಮುನ್ನುಗುತ್ತಿದ್ದು, ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದ್ದ ವಿಶಾಲ್ ಫಿಲ್ಮಿ ಫ್ಯಾಕ್ಟರಿ ನಿರ್ದೇಶಕ,  ನಟ ವಿಶಾಲ್ ತುಂಬಾ ಖುಷಿಯಾಗಿದ್ದಾರೆ.ಇದೇ ಖುಷಿಯಲ್ಲಿ ತನ್ನ ಆತ್ಮೀಯ ಸ್ನೇಹಿತ, ಕನ್ನಡದ ರಾಕಿಂಗ್ ಸ್ಟಾರ್ ಯಶ್ ಗಾಗಿ ವಿಶೇಷವಾದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.  ಈ ವಿಡಿಯೋದಲ್ಲಿ ಯಶ್ ಬೆಳೆದು ಬಂದ ರೀತಿ ಹಾಗೂ ಅವರು ಯಶೋ ಮಾರ್ಗ ಸಂಸ್ಥೆ ಮೂಲಕ ಕರ್ನಾಟಕದಲ್ಲಿ ಕೈಗೊಂಡಿರುವ ಸಮಾಜ ಸೇವಾ ಕಾರ್ಯಗಳನ್ನು ತಮಿಳು ಜನರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.ಸುಮಾರು ಐದು ನಿಮಿಷಗಳ ಈ ವಿಡಿಯೋದಲ್ಲಿ ಯಶ್  ಬಾಲ್ಯ ಹಾಗೂ ಅವರ ಆರಂಭಿಕ ಹಂತದ ಚಿತ್ರಗಳು, ನಂತರ ಗೂಗ್ಲಿ, ರಾಜಹುಲಿ, ಗಜಕೇಸರಿ, ಮಿಸಸ್ ಅಂಡ್ ಮಿಸ್ಟರ್ ರಾಮಾಚಾರಿ ಮತ್ತಿತರ ಚಿತ್ರಗಳ ವಿಡಿಯೋವನ್ನು ಬಳಸಿ, ಚಿತ್ರರಂಗದಲ್ಲಿ ಯಾವುದೇ ಗಾಡ್ ಪಾದರ್ ಇಲ್ಲದೆ ಯಶ್ ಉತ್ತುಂಗದ ಶಿಖರಕ್ಕೇರಿದ ರೀತಿಯನ್ನು  ವಿವರಿಸಿದ್ದಾರೆ.
ಒಟ್ಟಾರೇ, ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾವಾಗಿ  ದೇಶದೆಲ್ಲೆಡೆ  ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವಿವಿಧ ಚಿತ್ರರಂಗದ ನಟ, ನಟಿಯರು ಹಾಗೂ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರಿಂದ  ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

0 Comments

Leave a Comment

20 + 1 =

bg-news

   ಕಾವೇರಿ ಜಲ ವಿವಾದ: ತಮಿಳುನಾಡು ಮತ್ತು ಕರ್ನಾಟಕದ ನಾಯಕರು ನೀರಿನ ವಿವಾದದ ಬಗ್ಗೆ ಅವರ ನಿಲುವನ್ನು ಕಠಿಣಗೊಳಿಸಬಹುದೆಂದು ನಿರೀಕ್ಷಿಸಲಾಗಿದೆ, ಅದರಲ್ಲೂ ವಿಶೇಷವಾಗಿ ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಭಾವನಾತ್ಮಕ ಸಮಸ್ಯೆಯಿದೆ.

Login

Welcome! Login in to your account

Remember me Lost your password?

Lost Password

English English Kannada Kannada